Posts

Showing posts from July, 2023

ಸಮಾಲೋಚನಾ ಸಭೆ ಮುಧೋಳ ವಲಯ.. 4&5ನೇ ತರಗತಿಯ ಸಮಾಲೋಚನೆ ಸಭೆ.ದಿ.7-7-23 ಶುಕ್ರವಾರಬೆಳಿಗ್ಗೆ ಸಮಾಲೋಚನಾ ಸಭೆಯ ಉದ್ಘಾಟನೆ ನೆರವೇರಿಸಲಾಯಿತು. ಪ್ರಾಸ್ತಾವಿಕ ನುಡಿಗಳನ್ನು ಮುಧೋಳ ಸಿ.ಆರ್.ಸಿ ಶರಣಪ್ಪ ಪರಮಾ‌ ಅವರು ನೆರವೇರಿಸಿದರು. ನಂತರ ಫೌಂಡೇಶನ್ ನ ಶರಣು ಅವರು ಸಮಾಲೋಚನಾ ಸಭೆಯ ಉದ್ದೇಶಗಳನ್ನು ಸಮಯಪಾಲನೆಯ ಬಗ್ಗೆ ಮಾತನಾಡಿದರು. ಗಂಗಾಧರ ಸ್ವಾಮಿ, ಮದನಾ ಸಿ.ಆರ್.ಸಿ ವೀರಣ್ಣಗೌಡ, ಲಿಂಗಂಪಲ್ಲಿ ಸಿ.ಆರ್.ಸಿ ದೇವಿಂದ್ರಪ್ಪ, ರಿಬ್ಬನಪಲ್ಲಿ ಸಿ.ಆರ್.ಸಿ ಸಾಯಬಣ್ಣ ಹಾಗೂ ಚೈತನ್ಯ ಶಾಲೆಯ ಮುಖ್ಯ ಗುರುಗಳಾದ ಬಸಪ್ಪ ಪರಮಾ ಅವರು ಉಪಸ್ಥಿತರಿದ್ದರು.ದಿನದ ಮೊದಲ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮಣ ಅವರು ಕಳೆದ ತಿಂಗಳ ಅನುಭವ ಹಂಚಿಕೆಯನ್ನು ಸವಾಲುಗಳನ್ನು ಹಂಚಿಕೊಳ್ಳಲು ಹೇಳಿದರು. ಈ ಸಂದರ್ಭದಲ್ಲಿ ಭಾಗಾರ್ಥಿಗಳು ಸೇತುಬಂಧದ ಬಗ್ಗೆ, ಬಹುಭಾಷಾ ತರಗತಿ ನಿರ್ವಹಣೆಯ ಬಗ್ಗೆ ಮಕ್ಕಳ ಕಲಿಕೆಯ ಹಿಂದುಳಿಯುವಿಕೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರೋರ್ವರು ಬಹುಭಾಷಾ ತರಗತಿಯನ್ನು ಸಂಪನ್ಮೂಲವಾಗಿ ಬಳಸಿಕೊಂಡು ಕಲಿಸುತ್ತಿರುವ ತಮ್ಮ ತರಗತಿ ಅನುಭವವನ್ನು ಉದಾಹರಣೆಯೊಂದಿಗೆ ಹೇಳಿದರು. ತದನಂತರದಲ್ಲಿ ಒಂದು ಅಭಿನಯ ಗೀತೆಯನ್ನು ಮಾಡಿಸಿ ಚಹಾವಿರಾಮವನ್ನು ನೀಡಲಾಯಿತುಕನ್ನಡದ ಅವಧಿಯಲ್ಲಿ ಸುಗಮಕಾರರಾದ ಲಕ್ಷ್ಣ ಅವರು ಶಿಕ್ಷಕರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಪ್ರತಿ ತಂಡದಲ್ಲಿ 4-5ನೇ ತರಗತಿಯ ಜೂನ ತಿಂಗಳ ಪಾಠವನ್ನು ಗಮನಿಸಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡು ಮಂಡಿಸಲು ತಿಳಿಸಿದರು.೧) ಜೂನ ತಿಂಗಳ ಕಲಿಕಾ ಗುರಿಗಳು೨) ಕೈಗೊಂಡ ಕಲಿಕಾ ಚಟುವಟಿಕೆಗಳು೩) ಎದುರಿಸಿದ ಸವಾಲುಗಳು೪) ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನಿಮ್ಮ ಯೋಜನೆಗಳುಪ್ರತಿ ತಂಡವು ಗುಂಪಿನಲ್ಲಿ ಚರ್ಚಿಸಿ ದೊಡ್ಡ ಗುಂಪಿನೊಂದಿಗೆ ಹಂಚಿಕೊಂಡರು.ತಂಡ ೧:ಗುರಿ: ೪ನೇ ತರಗತಿಗೆ ಕನ್ನಡಮ್ಮನ ಹರಕೆ ಪದ್ಯ. ರಾಗವಾಗಿ ಅಭಿನಯದ ಮೂಲಕ ಹೇಳಿಸುವುದು. ಯುವ್ಟ್ಯೂಬ ಬಳಕೆ. ಪದಗಳ ಅರ್ಥವನ್ನು ತಿಳಿಹೇಳಿರುವುದು. ಸಾರಾಂಶವನ್ನು ವಿವರಿಸುವುದು. ಪ್ರಾಸ ಪದಗಳನ್ನು ಗುರುತಿಸುವುದು.ಸಜಾತಿ ಮತ್ತು ವಿಜಾತಿ ಒತ್ತಾಕ್ಷರಗಳ ಪರಿಚಯ ಮಾಡಿಸಿದ ನಂತರ ಪದ್ಯ ಬೋಧನೆ ಮಾಡಲಾಯಿತು. ಮಕ್ಕಳಿಗೆ ಇಲ್ಲಿ ನೀಡಿರುವ ನಾಲಿಗೆ ಸುರುಳಿಗಳು ಕಷ್ಟಕರವಾಗಿರುವುದರಿಂದ ಮಕ್ಕಳಿಗೆ ತೊಂದರೆ ಯಾಯಿತು. ಅದನ್ನು ಬಿಡಿಬಿಡಿಯಾಗಿ ಹೇಳಿ ನಂತರ ಪೂರ್ಣ ಪ್ರಮಾಣದಲ್ಲಿ ಹೇಳಿಸಲಾಯಿತು.೫ನೇ ತರಗತಿಯ ಒಟ್ಟಿಗೆ ಬಾಳುವ ಆನಂದ ಗದ್ಯ, ಮಾತುಗಾರಿಕೆಯ ಕೌಶಲವಿರುವುದರಿಂದ ಮಕ್ಕಳಿಗೆ ಪಾಠದ ಅಂಶಗಳನ್ನು ಇಟ್ಟುಕೊಂಡು ಚಟುವಟಿಕೆಯನ್ನು ಮಾಡಿಸುತ್ತ ಪಾಠದ ಆಶಯವನ್ನು ತಿಳಿಸುವುದು.ತಂಡ ೨: ಪಾತ್ರಾಭಿನಯ ಮಾಡಿಸುವುದು. ನಾಲ್ಕು ಹಂತದ ಪಾಠಯೋಜನೆ ತಯಾರಿಸುವುದು. ಪಾಠವಿವರಣೆ, ಮೌಲ್ಯ ಮಾಪನ, ಗ್ರಹಪಾಠ, ಇತರೆ ಜನಪದ ಕತೆಗಳನ್ನು ಓದಲು ತಿಳಿಸುವುದು.ತಂಡ ೩:ಕರ್ನಾಟಕದ ನಕಾಶೆ ಅದರ ಬಗ್ಗೆ ತಿಳಿಸುತ್ತಾ ರಾಗಬಧ್ದವಾಗಿ ಹಾಡಿ ತಿಳಿಸುವುದು.ರೈತ, ಕಲ್ಲು, ಮರ, ಹೋಲ, ಜನರ ಬಗ್ಗೆ ಪರಿಕಲ್ಪನೆ ನೀಡುವುದು. ಪಾಠ ವಿವರಣೆ , ಬಹುಭಾಷಿಕ ಪರಿಸರದ ಸಂದರ್ಭದಲ್ಲಿ ಇಲ್ಲಿಯ ಪದಗಳ ಅರ್ಥವನ್ನು ತಿಳಿಸಿ ಹೇಳುವುದು.ತಂಡ೪: ಪದ್ಯವನ್ನು ಅರ್ಥೈಸುವುದು. ರಾಗಬದ್ಧವಾಗಿ ಹಾಡುವುದು. ರಾಜ್ಯದ ಬಗ್ಗೆ ಅಭಿಮಾನ ಮೂಡಿಸುವುದು.‌ಮಕ್ಕಳು ಪ್ರಾಸಪದಗಳನ್ನು ಗುರುತಿಸುವಲ್ಲಿ ತೊಂದರೆಗಳನ್ನು ಎದುರಿಸಿದರು. ಸರಿಯಾದ ಪದ ಆರಿಸಿ ಬರೆಯುವುದರಲ್ಲಿ ಸಮಸ್ಯೆ.ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದರ ಬಗ್ಗೆ ಅರಿವು ಮೂಡಿಸುವುದುನಂತರ ಸುಗಮಕಾರರು ಜುಲೈ ತಿಂಗಳಲ್ಲಿಯ ಪಾಠಗಳನ್ನು ಹೇಳುತ್ತ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ರೂಪಿಸುವುದರ ಬಗ್ಗೆ ತಿಳಿಸಿದರು. ನಂತರ ಗಂಗಾಧರ ಅವರು ಆಯಾ ಪಾಠಗಳ ಸಾಮರ್ಥ್ಯವನ್ನು ತಿಳಿಸುತ್ತಾ ನಮ್ಮ ಚಟುವಟಿಕೆಗಳು ಸಾಮರ್ಥ್ಯವನ್ನು ಈಡೇರಿಸುವ ನಿಟ್ಟಿನಲ್ಲಿ ರೂಪಿಸಬೇಕೆಂಬ ಅಂಶವನ್ನು ಹೇಳಿದರು.ಅವಧಿ ೩. ಸುಗಮಕಾರರಾದ ರತ್ನಾ ಬಾಯಿ ಅವರು ಕೆಲವು ಪ್ಲ್ಯಾಶ ಕಾರ್ಡ ಅನ್ನು ಎಲ್ಲಾ ಶಿಕ್ಷಕರಿಗೂ ನೀಡಿ ವಾಕ್ಯ ರಚನೆಯ ಚಟುವಟಿಕೆಯನ್ನು ನೀಡಿದರು.ಸುಗಮಕಾರರು ಶಿಕ್ಷಕರನ್ನು ೪ ಗುಂಪುಗಳಲ್ಲಿ ವಿಂಗಡಿಸಿ ಪ್ರತಿ ಎರಡು ಗುಂಪಿಗಳಿಗೆ 4 & 5ನೇ ತರಗತಿಯ ಇಂಗ್ಲೀಷ ಚಟುವಟಿಕೆಗಳನ್ನು ಹಂಚಿಕೊಳ್ಳಲು ತಿಳಿಸಿದರು. ಮಕ್ಕಳು ಇಂಗ್ಲೀಷ್ ಕಲಿಕೆಯಲ್ಲಿ ಹಿಂದಿರುವುದರಿಂದ ಪಾಠವನ್ನು ಆರಂಭಿಸದೆ ಅವರನ್ನು ನಲಿಕಲಿ ಮಕ್ಕಳೊಟ್ಟಿಗೆ ಅದೇ ವಿಷಯವಸ್ತುವನ್ನು ಬೋಧಿಸಲಾಗಿದೆ. ಧ್ವನಿ, ಸಂಕೇತ ಮತ್ತು ಅಕ್ಷರಗಳನ್ನು ಗುರುತಿಸುತ್ತಾ 5ಅಕ್ಷರದ ಪದಗಳನ್ನು ಓದುತ್ತಿದ್ದಾರೆ. ಹಾಗಾಗಿ ಮಕ್ಕಳಿಗೆ ಫೊನಿಕ್ ಅಪ್ರೋಚಲ್ಲಿ ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತಿ ಧ್ವನಿಗೂ ಸಂಕೇತಗಳನ್ನು ಸಹಸಂಬಂಧಿಕರಿಸುತ್ತಾ ಹೇಳುವುದರ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ನಂತರ this, that, they, on, in, by, between and under ಪದಗಳ ಬಳಕೆಯನ್ನು ಮಕ್ಕಳು ಸರಿಯಾಗಿ ಮಾಡುತ್ತಿರುವುದರ ಬಗ್ಗೆ ಹಂಚಿಕೊಂಡರು.ಊಟದ ಅವಧಿಯ ನಂತರ ಸುಗಮಕಾರರಾದ ರತ್ನಾಬಾಯಿ ಅವರು ಸೈಮನ್ ಸೇಸ್ ಚಟುವಟಿಕೆಯನ್ನು ಮಾಡಿಸಿದರು. ಆ ಚಟುವಟಿಕೆಯ ಮೂಲಕ ಮಕ್ಕಳಿಗೆ ಇಂಗ್ಲೀಯನಲ್ಲಿ ಏಕವಚನ ಬಹುವಚನದ ಪರಿಕಲ್ಪನೆಗೆ ಸಹಸಂಬಂಧಿಕರಿಸಿದರು.ಅವಧಿ ೪: ಪರಿಸರ ಅಧ್ಯಯನಸುಗಮಕಾರು ಶರಣಕುಮಾರ (APF)ವಿಜ್ಞಾನವನ್ನು ನಾವು ಏಕೆ ಕಲಿಯಬೇಕು? ಯಾಕೆ ಬೋಧನೆ ಮಾಡಬೇಕು? ಎಂಬ ಪ್ರಶ್ನೆಯನ್ನು ಹಾಕುವುದರ ಮೂಲಕ ಚರ್ಚೆಯನ್ನು ಆರಂಭಿಸಿದರು. ನಂತರ ಶಿಕ್ಷಕರ ಅಭಿಪ್ರಾಯಗಳನ್ನು ತೆಗೆದುಕೊಂಡು ವೈಜ್ಞಾನಿಕ ಆಲೋಚನೆಯ ಬಗ್ಗೆ ಮಾತನಾಡಿದರು. ವಿಜ್ಞಾನ ಪ್ರಸ್ತುತ ಸತ್ಯವನ್ನು ಒಪ್ಪಿಕೊಳ್ಳುತ್ತದೆ. ಎಂದು ಕೆಲವು ಉದಾಹರಣೆಗಳ ಮೂಲಕ ಹೇಳಿದರು. ಆ ನಿಟ್ಟಿನಲ್ಲಿ ವಿಜ್ಞಾನ ಬೋಧಿಸುವ ಶಿಕ್ಷಕರು ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳುವ ಅಗತ್ಯತೆಯನ್ನು ಅರಿತುಕೊಳ್ಳುವುದು. ಹಾಗೆಯೆ ವಿಜ್ಞಾನ ಬೋದನೆಯ ಉದ್ದೇಶಗಳನ್ನು ತಿಳಿಸಲಾಯಿತು. ನಂತರ ಕಳೆದ ತಿಂಗಳಲ್ಲಾದ ಚಟುವಟಿಕೆಗಳನ್ನು ಕುರಿತು ಚರ್ಚಿಸಿದರು. ಪ್ರಾಣಿಪಪಂಚ, ಜೀವಿಗಳು ಎನ್ನುವ ಅಭಿಪ್ರಯವನ್ನು ಹಂಚಿಕೊಂಡರುಮುಂದಿನ ತಿಂಗಳಲ್ಲಿಯ ಪಾಠಗಳನ್ನು ನೋಡಿದಾಗ ಕುಟುಂಬ, ವನಸಂಚಾರ, ಸಸ್ಯಾಧಾರ ಬೇರು ಪಾಠಗಳನ್ನು ಹಂಚಿಕೊಂಡರು. ನಂತರ ಸುಗಮಕಾರರು ಪಠ್ಯವನ್ನು ತೋರಿಸುತ್ತಾ ಚಟುವಟಿಕೆಗಳನ್ನು ರೂಪಿಸುವುದರ ಬಗ್ಗೆ ಚರ್ಚೆಯ ಮೂಲಕ ಹಂಚಿಕೊಂಡರು.ತದನಂತರದಲ್ಲಿ ಗಣಿತದ ವಿಷಯವನ್ನು ಚರ್ಚಿಸುತ್ತಾ ಸಂಕಲನ ವ್ಯವಕಲನದಲ್ಲಿ ಅನುಸರಿಸಬೇಕಾದ ಕ್ರಮವಿಧಿಗಳು, ಮಕ್ಕಳಿಗೆ ಪರಿಕಲ್ಪನೆ ಕಟ್ಟಿಕೊಡುವ ಸಂದರ್ಭದಲ್ಲಿ ಮಾಡಿಸಬಹುದಾದ ಚಟುವಟಿಕೆಗಳನ್ನು ವಿವರಿಸಿದರು..ಕೊನೆಗೆ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿ ಈ ದಿನದ ಸಮಾಲೋಚನಾ ಸಭೆಯನ್ನು ಕೊನೆಗೊಳಿಸಲಾಯಿತು.

Image