6ನೇ ನಲಿಕಲಿ ಸಮಾಲೋಚನಾ ಸಭೆ
ಇಂದು ಸರಸ್ವತಿ ವಿದ್ಯಾ ಮಂದಿರ ಮುಧೋಳದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸೇಡಂ ಅಜಿಮ್ ಪ್ರೇಮ್ ಜಿ ಫೌಂಡೇಶನ ಸೇಡಂ ರವರ ಸಹಯೋಗದಲ್ಲಿ ಮುಧೋಳ ರಿಬ್ಬನಪಲ್ಲಿ, ಲಿಂಗಂಪಲ್ಲಿ, ಮದನಾ, ಕಾನಾಗಡ್ಡ, ಮೋತಕಪಲ್ಲಿ, ಕೋಲಕುಂದಾ ,ಕ್ಲಸ್ಟರ್ಗಳ ನಲಿಕಲಿ ಸುಗಮಕಾರರಿಗೆ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಮಾಲೋಚನೆ ಸಭೆಯಲ್ಲಿ ಡಿಸೆಂಬರ್ ತಿಂಗಳಿನ ಕೊನೆಗೆ ಮತ್ತು ಜನವರಿ ತಿಂಗಳಲ್ಲಿ ಬರುವ ಕನ್ನಡ, ಗಣಿತ ,ಪರಿಸರ, ಅಧ್ಯಯನ, ENK ವಿಷಯಗಳ ಚಟುವಟಿಕೆಗಳ ಪರಿಚಯ ಮಾಡುವುದರ ಜೊತೆಗೆ ವಿವಿಧ ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ನಾಲ್ಕು ವಿಷಯಗಳ ಚಟುವಟಿಕೆಗಳನ್ನು ಸುಗಮಕಾರರಿಗೆ ಗುಂಪುಗಳಾಗಿ ವಿಂಗಡಿಸಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಹಾಗೆ ಮಾಡಲಾಯಿತು. ನಲಿ ಕಲಿಯಲ್ಲಿ ದಾಖಲೆಗಳ ನಿರ್ವಹಣೆ ಮತ್ತು ಮೌಲ್ಯಮಾಪನ ರೂಪಣಾತ್ಮಕ ಮೌಲ್ಯಮಾಪನ 3 ರ ಕುರಿತು ಇಲಾಖೆಯಿಂದ ನಿಗದಿಪಡಿಸಿರುವ ಕಲಿಕಾ ಫಲಗಳಿಗೆ ಮೌಲ್ಯಂಕನ ಸೂಚಕಗಳನ್ನು ಮಾಡಿಕೊಂಡು ವಿವಿಧ ಸಾಧನ ತಂತ್ರಗಳನ್ನು ಬಳಸಿಕೊಂಡು ಮಕ್ಕಳಿಗೆ ಮೌಲ್ಯಮಾಪನ ಮಾಡಲು ತಿಳಿಸಲಾಯಿತು. ಈ ಸಮಾಲೋಚನೆ ಸಭೆಯಲ್ಲಿ BRP ಶ್ರೀ ಶಿವಕುಮಾರ್ ಬಟಗೇರಾ ರವರು CRP ಗಳಾದ ಶ್ರೀ ದ...