6ನೇ ನಲಿಕಲಿ ಸಮಾಲೋಚನಾ ಸಭೆ
ಇಂದು ಸರಸ್ವತಿ ವಿದ್ಯಾ ಮಂದಿರ ಮುಧೋಳದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸೇಡಂ ಅಜಿಮ್ ಪ್ರೇಮ್ ಜಿ ಫೌಂಡೇಶನ ಸೇಡಂ ರವರ ಸಹಯೋಗದಲ್ಲಿ ಮುಧೋಳ ರಿಬ್ಬನಪಲ್ಲಿ, ಲಿಂಗಂಪಲ್ಲಿ, ಮದನಾ, ಕಾನಾಗಡ್ಡ, ಮೋತಕಪಲ್ಲಿ, ಕೋಲಕುಂದಾ ,ಕ್ಲಸ್ಟರ್ಗಳ ನಲಿಕಲಿ ಸುಗಮಕಾರರಿಗೆ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಮಾಲೋಚನೆ ಸಭೆಯಲ್ಲಿ ಡಿಸೆಂಬರ್ ತಿಂಗಳಿನ ಕೊನೆಗೆ ಮತ್ತು ಜನವರಿ ತಿಂಗಳಲ್ಲಿ ಬರುವ ಕನ್ನಡ, ಗಣಿತ ,ಪರಿಸರ, ಅಧ್ಯಯನ, ENK
ವಿಷಯಗಳ ಚಟುವಟಿಕೆಗಳ ಪರಿಚಯ ಮಾಡುವುದರ ಜೊತೆಗೆ ವಿವಿಧ ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ನಾಲ್ಕು ವಿಷಯಗಳ ಚಟುವಟಿಕೆಗಳನ್ನು ಸುಗಮಕಾರರಿಗೆ ಗುಂಪುಗಳಾಗಿ ವಿಂಗಡಿಸಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಹಾಗೆ ಮಾಡಲಾಯಿತು. ನಲಿ ಕಲಿಯಲ್ಲಿ ದಾಖಲೆಗಳ ನಿರ್ವಹಣೆ ಮತ್ತು ಮೌಲ್ಯಮಾಪನ ರೂಪಣಾತ್ಮಕ ಮೌಲ್ಯಮಾಪನ 3 ರ ಕುರಿತು
ಇಲಾಖೆಯಿಂದ ನಿಗದಿಪಡಿಸಿರುವ ಕಲಿಕಾ ಫಲಗಳಿಗೆ ಮೌಲ್ಯಂಕನ ಸೂಚಕಗಳನ್ನು ಮಾಡಿಕೊಂಡು ವಿವಿಧ ಸಾಧನ ತಂತ್ರಗಳನ್ನು ಬಳಸಿಕೊಂಡು ಮಕ್ಕಳಿಗೆ ಮೌಲ್ಯಮಾಪನ ಮಾಡಲು ತಿಳಿಸಲಾಯಿತು. ಈ ಸಮಾಲೋಚನೆ ಸಭೆಯಲ್ಲಿ BRP ಶ್ರೀ ಶಿವಕುಮಾರ್ ಬಟಗೇರಾ ರವರು CRP ಗಳಾದ ಶ್ರೀ ದೇವೇಂದ್ರಪ್ಪ ಯಾದವ್ ಶ್ರೀ ವೀರನಗೌಡ ಪಾಟಿಲ್ ಶ್ರೀ ಸಾಯಬಣ್ಣ ಪೂಜಾರಿ ಶ್ರೀ ಶರಣು ಪರಮಾ ಶ್ರೀ ಅಶೋಕ ರೆಡ್ಡಿ ಉಲಿಗೊಂಡಮ್ ಶ್ರೀ ನರಸಪ್ಪ ಪೂಜಾರಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ನಾಗೇಶ ಧನವಾಡ ಅಜಿಂ ಪ್ರೇಮ್ ಜಿ ಫೌಂಡೇಶನ್ ಚಿಂಚೋಳಿ ಮತ್ತು ಸೇಡಂನ ಮುಖ್ಯಸ್ಥರಾದ ಶ್ರೀ ಗಂಗಾಧರ್ ಸ್ವಾಮಿ ಸರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ನಿರ್ಮಲಾ ಶ್ರೀಮತಿ ರತ್ನಬಾಯಿ ಕರಿಗೂಳಿ ದುಗನೂರ 7 ಕ್ಲಸ್ಟರ್ ಗಳ ನಲಿ ಕಲಿ ಸುಗಮಕಾರರು ಭಾಗವಹಿಸಿದ್ದರು.
ಸಮಾಲೋಚನೆ ಸಭೆಯಲ್ಲಿ ಪ್ರತಿ ವಿಷಯಗಳ ಪ್ರತಿ ಚಟುವಟಿಕೆಗಳಲ್ಲಿ ಸುಗಮಕಾರರ ಭಾಗವಹಿಸುವಿಕೆ ಅದ್ಭುತವಾಗಿತ್ತು.ಎಲ್ಲರ ಸಹಕಾರ ಮಾರ್ಗದರ್ಶನದಿಂದ ಸಮಾಲೋಚನೆ ಸಭೆ ಉತ್ತಮವಾಗಿ ನಡೆಯಿತು,
ನಲಿಕಲಿ ಸಮಾಲೋಚನೆ ಸಭೆ ಯಶಸ್ವಿಗೆ ಸಹಕರಿಸಿರುವ ಸರ್ವರಿಗೂ ವಂದನೆಗಳು ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ಮಾರ್ಗದರ್ಶನ ಸದಾ ಹೀಗೆ ಇರಲಿ.
💐💐🙏🙏
Comments
Post a Comment